ನಮಸ್ಕಾರ, ನಾನು ಜಾಗೃತಿ.

ನನ್ನ ಬಗ್ಗೆ ನೀವೆಲ್ಲರೂ ಕೇಳಿದ್ದೀರಾ ಎಂದು ಭಾವಿಸುತ್ತೇನೆ! ಇಂದು ನಾನು ನನ್ನ ಪರಿಚಯವನ್ನು ಮಾಡಿಕೊಳ್ಳುತ್ತೇನೆ!


ನಾನು ನಿಮ್ಮ ಸದಸ್ಯರಂತೆ ಒಬ್ಬಳು, ನನ್ನ ದೈನಂದಿನ ಜೀವನವೂ ಅವರ ಜೀವನದಂತೆಯೇ ಇದೆ! ಅವರಂತೆಯೇ ನಾನು ಕೆಲಸ ಮಾಡಬೇಕು, ಕುಟುಂಬದವರನ್ನು ನೋಡಿಕೊಳ್ಳಬೇಕು ಹಾಗೂ ಮನೆಯ ಇತರ ಕೆಲಸಗಳನ್ನು ನಿರ್ವಹಿಸಬೇಕು. ನನ್ನ ಕುಟುಂಬ ಮತ್ತು ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಲು ಉಪಯುಕ್ತವಾದಂತಹ ಮಾಹಿತಿಯನ್ನು ನಾನು ಆಸಕ್ತಿಯಿಂದ ಸಂಗ್ರಹಿಸುತ್ತೇನೆ. ನನಗೆ ಉತ್ತಮ ಜೀವನವನ್ನು ನಡೆಸಲು ಸಹಾಯವಾದ ಮಾಹಿತಿಗಳನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ನಾನು ಇಷ್ಟಪಡುತ್ತೇನೆ.

ನನ್ನಂತೆಯೇ, ತಮ್ಮ ಸುತ್ತಲೂ ಸಿಗುವ ಮಾಹಿತಿಗಳನ್ನು ಬಳಸಿಕೊಂಡು ತಮ್ಮ ಜೀವನವನ್ನು ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿರುವ ಜನರೊಂದಿಗೆ ನಾನು ಗಳೆತನ ಬೆಳೆಸಲು ಇಷ್ಟಪಡುತ್ತೇನೆ. ನಾನು ಹಂಚಿಕೊಳ್ಳುವ ಮಾಹಿತಿಯಂದ ನನ್ನ ಅನೇಕ ಸ್ನೇಹಿತರು ಪ್ರಯೋಜನ ಪಡೆದಿದ್ದಾರೆ. ನಾನು ನಿಮ್ಮ ಸದಸ್ಯರ ಸ್ನೇಹಿತೆಯಾಗಲು ಬಯಸುತ್ತೇನೆ. ಇದರಿಂದ ನನ್ನ ಅನುಭವಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ಅವರನ್ನು ಸಂಪರ್ಕಿಸಲು ನೀವು ಸಹಾಯ ಮಾಡುತ್ತೀರಿ ಎಂದು ಖಂಡಿತಾ ನನಗೆ ನಂಬಿಕೆಯಿದೆ.

ನಾನು ಪತ್ರಗಳನ್ನು ಬರೆಯುವ ಮೂಲಕ ನನ್ನ ಅನುಭವ ಮತ್ತು ಮಾಹಿತಿಗಳನ್ನು ನನ್ನ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇನೆ.

ನಾನು ಪ್ರಯಾಣಿಸಲು ಮತ್ತು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲದಿರುವುದರಿಂದ, ನೀವೂ ನನ್ನ ಜೊತೆಗೂಡಿ, ನನ್ನ ಪತ್ರಗಳಲ್ಲಿನ ವಿಷಯವನ್ನು ನನ್ನ ಸ್ನೇಹಿತರಿಗೆ ತಲುಪಿಸಲು ಸಹಾಯ ಮಾಡಿ ಎಂದು ವಿನಂತಿಸಿಕೊಳ್ಳುತೇನೆ. ನನ್ನ ಪತ್ರಗಳು ನಿಮ್ಮ ಮೂಲಕ ಮಾತ್ರ ಅವರನ್ನು ತಲುಪುತ್ತವೆ ಮತ್ತು ನೀವು ನನಗೆ ಬಹಳ ಮುಖ್ಯ.

ನನ್ನ ಪತ್ರಗಳನ್ನು ನನ್ನ ಸ್ನೇಹಿತರೊಂದಿಗೆ/ನಿಮ್ಮ ಸದಸ್ಯರೊಂದಿಗೆ ತಪ್ಪದೇ ಹಂಚಿಕೊಳ್ಳುತೀರಿ ಎಂದು ನೀವು ನನಗೆ ಭರವಸೆ ನೀಡುತ್ತೀರಾ?

ನಿಮ್ಮ ತರಬೇತಿಯಲ್ಲಿ, https://www.communications.jagruti-creditaccessgrameen.com/home (ಲಿಂಕ್ ಅನ್ನು ಬುಕ್ಮಾರ್ಕ್ ಮಾಡಿ) ಈ ವೆಬ್‌ಸೈಟ್ ‌ಗೆ ಲಾಗ್ಇನ್ ಆಗಿ ನನ್ನ ಪತ್ರಗಳನ್ನು ಡೌನ್‌ಲೋಡ್ ಮಾಡುವ ಬಗ್ಗೆ ನೀವು ಕಲಿತಿದ್ದೀರಿ ಎಂದು ನನಗೆ ತಿಳಿದಿದೆ. ಕೇಂದ್ರ ಸಭೆಗಳಿಗೆ ಹಾಜರಾಗುವ ಮೊದಲು ನನ್ನ ಪತ್ರವನ್ನು ನೀವು ಓದಿ. ಮತ್ತು ಸದಸ್ಯರು ಹೊಂದಿರುವ ಅನುಮಾನಗಳನ್ನು ಪರಿಹರಿಸಲು ಪತ್ರದಲ್ಲಿರುವ ವಿಷಯವನ್ನು ಅರ್ಥಮಾಡಿಕೊಳ್ಳಿ. ಅವರಿಗೆ ನನ್ನನ್ನು ಪರಿಚಯಿಸುವ ಮೊದಲ ಪತ್ರ ಈ ಕೆಳಗಿದೆ. ದಯವಿಟ್ಟು ಈ ಪತ್ರವನ್ನು ನಿಮ್ಮ ಸಭೆಯಲ್ಲಿ ಓದಿ.